By Sharvin Dsouza

Belthangady, Oct 11, 2024 : The Indian Catholic Youth Movement (ICYM) Mangalore diocese, in collaboration with the ICYM Belthangady deanery and unit, is organizing the Diocesan Youth Convention 'DYC - 2024' event from October 10 to 13.

ಭಾರತೀಯ ಕಥೋಲಿಕ ಯುವ ಸಂಚಾಲನ (ICYM) ಮಂಗಳೂರು ಧರ್ಮಪ್ರಾಂತ್ಯದಿಂದ 'DYC - 2024' ಕಾರ್ಯಕಮದ ಆಯೋಜನೆ

ಭಾರತೀಯ ಕಥೋಲಿಕ ಯುವ ಸಂಚಾಲನ (ICYM) ಮಂಗಳೂರು ಧರ್ಮಪ್ರಾಂತ್ಯವು ICYM ಬೆಳ್ತಂಗಡಿ ವಲಯ ಮತ್ತು ICYM ಬೆಳ್ತಂಗಡಿ ಘಟಕದ ಸಹಯೋಗದೊಂದಿಗೆ ಅಕ್ಟೋಬರ್ 10 ರಿಂದ 13 ರವರೆಗೆ 'DYC - 2024' ಅನ್ನು ಹೆಮ್ಮೆಯಿಂದ ಆಯೋಜಿಸುತ್ತಿದೆ. ಈ ಕಾರ್ಯಕ್ರಮವು "ಕ್ರಿಸ್ತನ ಮಾರ್ಗದಲ್ಲಿ ನಡೆಯೋಣ ಮತ್ತು ಸೇವೆಯ ಸಮಾಜವನ್ನು ನಿರ್ಮಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭಿಸಲಾಯಿತು.

ಕಾರ್ಯಕ್ರಮವು 'ಹೊರೆಕಾಣಿಕೆ ಸಮಾರಂಭ' ದೊಂದಿಗೆ ಪ್ರಾರಂಭಗೊಂಡು, ಡಿವೈಸಿ 2024ರ ಲಾಂಛನದ ಧ್ವಜಾರೋಹಣದೊಂದಿಗೆ ಸಭೀಕರನ್ನು ಉದ್ದೇಶಿಸಿ ಮಾತಾನಾಡಿದ ಫಾ. ಕ್ಲಿಫ್‌ರ್ಡ್ ಬೆಳ್ತಂಗಡಿ ಹೋಲಿ ರಿಡಿಮರ್ ಶಾಲೆಯ ಪ್ರಾಂಶುಪಾಲರು "ಇಂದು 12ವಲಯದ ಯುವಜನರು ತಂದ ಹೊರೆಕಾಣಿಕೆ ಸಂಕೇತವಾಗಿದೆ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರ ಏಕತೆ ಮತ್ತು ಐಸಿವೈಮ್ ಸಂಘದ ಪರ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ". ಇದರೊಂದಿಗೆ ಎಲ್ಲರಿಗೂ ಶುಭಹಾರೈಸಿದರು. 12 ವಲಯದ ಅಧ್ಯಕ್ಷರು 'ಡಿವೈಸಿ-2024' ಲಾಂಛನ ಧ್ವಜದ ಅಡಿಯಲ್ಲಿ ವೇದಿಕೆಗೆ ಮೆರವಣಿಗೆ ನಡೆಸಿದರು. ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ವಿನ್‌ಸ್ಟನ್ ಜೋಯಲ್ ಸಿಕ್ವೇರಾ ಅವರು ಗಣ್ಯರಯನ್ನು ಸ್ವಾಗತಿಸಿದರು. ಡಿವೈಸಿ-2024 ಸಾಂಕೇತಿಕವಾಗಿ ಉದ್ಘಾಟಿಸಿ ದ ಮುಖ್ಯ ಅಥಿತಿ ನಿವೃತ್ತ ಜುಡಿಷಿಯಲ್ ನ್ಯಾಯವಾದಿ ವಿಜೇತ ಪಿಂಕಿ ಲೋಬೊ ಅವರು ಯುವಜನರನ್ನು ಉದ್ದೇಶಿಸಿ, "ಯುವಜನರಲ್ಲಿ ತಾಳ್ಮೆ ಮತ್ತು ಸೃಜನಶೀಲತೆ ಬೇಕು ಅದು ಇಂದು ನಾನು ಐಸಿವೈಎಂ ಯುವಜನರಲ್ಲಿ ನೊಡುತ್ತಿದ್ದೇನೆ". ಇಂತಹ ದೊಡ್ಡ ಮಟ್ಟದ ಯುವಜನ ಸಮ್ಮೇಳನಕ್ಕೆ ಹಾಜರಿದ್ದ ಎಲ್ಲಾ ಯುವಜನರಿಗೆ ಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ನಿವೃತ್ತ ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಿ, ಮಾತನಾಡಿ ಯುವಜನರು ದೇಶದ ಭವಿಷ್ಯ. ಇಂದು ಯುವಜನರಲ್ಲಿ ಧ್ಯೇಯ ಉಳ್ಳ ಬದುಕು ಅತೀ ಮುಖ್ಯವಾಗಿದೆ. ಯುವಜನರು ತಮ್ಮ ಭವಿಷ್ಯದ ಕನಸನ್ನು ಕಾಣಬೇಕು. ನಮ್ಮ ನಾಡಲ್ಲೇ ಇದ್ದು ಅಲ್ಲೇ ಸಾಧಿಸಿ ಒಂದು ಹೆಸಾರಾಂತ ವ್ಯಕ್ತಿ ನಮ್ಮ ಸಮುದಾಯದ ವ್ಯಕ್ತಿ ಎಂದು ಹೇಳುವ ರೀತಿ ಮಾಡಬೇಕೆಂದು ಹೇಳಿದರು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ವಲಯ ಮತ್ತು ಬೆಳ್ತಂಗಡಿ ಚರ್ಚ್ ಧರ್ಮಗುರುಗಳು ಅ. ವಂ. ಫಾ. ವಾಲ್ಟಾರ್ ಡಿಮೆಲ್ಲೊ, ಐಸಿವೈಎಂ ಬೆಳ್ತಂಗಡಿ ವಲಯದ ನಿರ್ದೇಶಕರಾದ ವಂ.ಫಾ. ಪ್ರವೀಣ್ ಡಿಸೋಜ, ಬೆಳ್ತಂಗಡಿ ಹೋಲಿ ರಿಡೀಮರ್ ಶಾಲೆಯ ಪ್ರಾಂಶುಪಾಲರಾದ ಕ್ಲಿಫರ್ಡ್ ಪಿಂಟೋ, ಬೆಳ್ತಂಗಡಿ ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷರಾದ ವಾಲ್ಟರ್ ಮೋನಿಸ್, ಬೆಳ್ತಂಗಡಿ ಚರ್ಚ್ ಪಾಲನಾ ಪರಿಷದ್ ನ ಕಾರ್ಯದರ್ಶಿ ಶ್ರೀ ಗಿಲ್ಬರ್ಟ್ ಪಿಂಟೋ; ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ನಿರ್ದೇಶಕರಾದ ವಂ. ಫಾ. ಅಶ್ವಿನ್ ಕಾರ್ಡೋಜಾ, ಐಸಿವೈಎಂ ಜಂಟಿ ಕಾರ್ಯದರ್ಶಿ ಹಾಗೂ ಬೆಳ್ತಂಗಡಿಯ ವಲಯದ ಪ್ರತಿನಿಧಿಯಾದ ಜೋಯ್ಸ್ಟನ್ ಡಿಸೋಜಾ, ಐಸಿವೈಎಂ ಬೆಳ್ತಂಗಡಿ ವಲಯದ ಅಧ್ಯಕ್ಷ ಸುಪ್ರೀತ್ ಫೆರ್ನಾಂಡಿಸ್, ಐಸಿವೈಎಂ ಬೆಳ್ತಂಗಡಿ ವಲಯದ ಕಾರ್ಯದರ್ಶಿ ಮೊನಾಲ್ ರಸ್ಕ್ವಿನ್ಹಾ, ಐಸಿವೈಎಂ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಅನ್ಸೆಲ್ಮಾ ಡಿಸೋಜಾ, ಮತ್ತು ಐಸಿವೈಎಂ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಅಜಯ್ ರೋಡ್ರಿಗಸ್, ಹಾಗೂ ಐಸಿವೈಎಮ್ ಮಂಗಳೂರು ಧರ್ಮಪ್ರಾಂತ್ಯದ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಹಾಗೇಯೆ ಈ ಸಮಾರಂಭದ ಗೌರವಾನ್ವಿತ ಅತಿಥಿ‌ ಹಾಗೂ ಬೆಳ್ತಂಗಡಿ ವಲಯದ ಮತ್ತು ಬೆಳ್ತಂಗಡಿ ಚರ್ಚ್ ಧರ್ಮಗುರುಗಳಾದ ಅ.ವಂ.ಫಾ.ವಾಲ್ಟಾರ್ ಡಿಮೆಲ್ಲೊ ಇವರು ಮಾತಾಡಿ ಈ ಸಮ್ಮೇಳನದಲ್ಲಿ‌ ಕಲಿಯಲು ತುಂಬಾ ವಿಷಯವಿದೆ, ಈ ಯುವ ಸಮ್ಮೇಳನದಲ್ಲಿ ಕಲಿಯುವ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆದರ್ಶ ಯುವಕರಾಗಿ ಬೆಳೆಯಬೇಕೆಂದು ತಮ್ಮ ಸಂದೇಶ ನೀಡಿದರು.

ಈ ಸಮಾರಂಭದ ಅತಿಥಿ ಹಾಗೆಯೇ ಐಸಿವೈಎಮ್ ಬೆಳ್ತಂಗಡಿ ವಲಯದ ನಿರ್ದೇಶಕರಾದ ವಂದನಿಯ ಫಾ.‌ ಪ್ರವೀಣ್ ಡಿಸೋಜ ಇವರು ತಮ್ಮ ಸಂದೇಶದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಎಲ್ಲಾ ಯುವಜನತೆ ಒಟ್ಟಾಗಿ ಈ ಸಮ್ಮೇಳನದಲ್ಲಿ ಒಟ್ಟುಗೂಡಿದ್ದಾರೆ. ಯುವ ಸಮ್ಮೇಳನ ಕಾರ್ಯಕ್ರಮವನ್ನು ನಡೆಸಲು ಪೂರ್ವ ತಯಾರಿ ಮಾಡಿದ ಬೆಳ್ತಂಗಡಿ ವಲಯ ಮತ್ತು ಬೆಳ್ತಂಗಡಿ ಘಟಕದ ಅಧ್ಯಕ್ಷ ಕಾರ್ಯದರ್ಶಿ ಹಾಗೂ ಎಲ್ಲ ಸದಸ್ಯರಿಗೆ ಪ್ರಶಂಶಿಸಿದರು.

ಐಸಿವೈಎಂ ಮಂಗಳೂರು ಧರ್ಮಪ್ರಾಂತ್ಯದ ಕಾರ್ಯದರ್ಶಿ ಆ್ಯಶ್ಲಿನ್ ಅವಿತಾ ಡಿಸೋಜಾ ವಂದಿಸಿದರು, ಐಸಿವೈಎಂ ಸುರತ್ಕಲ್ ವಲಯದ ಕಾರ್ಯದರ್ಶಿ ಮರಿಯಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.