Media Release

Bajpe, Aug 12 : Holy Family High School, Bajpe inaugurated the Diamond Jubilee celebration on 12th August 2024.


ಶಾಲಾ ಅಭಿವೃದ್ಧಿಯಲ್ಲಿ ಸಮಾಜದ ಜನರ ಸಹಭಾಗಿತ್ವ ಅತಿ ಅಗತ್ಯ- ವಂ| ಭ |ಫ್ಲಾವಿಯ ವಿಲ್ಮಾ ಬಿ ಎಸ್

ಸಮಾಜದ ಒಂದು ಶಾಲೆ ಗುಣಮಟ್ಟದ ಶಿಕ್ಷಣದೊಂದಿಗೆ ಮೌಲ್ಯ ಆಧಾರಿತ ವಿಚಾರಧಾರೆ ಇರುವ ಶಿಕ್ಷಣವನ್ನು ನೀಡಿ ಶಾಲೆ ಅಭಿವೃದ್ಧಿ ಆಗಬೇಕಾದರೆ ಆ ಶಾಲೆಯ ಸಮಾಜದ ಜನರ ಸಹಭಾಗಿತ್ವ ಅತಿ ಅಗತ್ಯ ಈ ನಿಟ್ಟಿನಲ್ಲಿ ಬಜಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯು ಸಾರ್ಥಕ 60 ವರ್ಷಗಳನ್ನು ಪೂರ್ಣಗೊಳಿಸಿ ವಜ್ರ ಮಹೋತ್ಸವವನ್ನು ಆಚರಿಸುವ ಈ ಕಾಲಘಟ್ಟದಲ್ಲಿ ಸಮಾಜದ ಜನರ ಶಾಲಾ ಹಿತೈಷಿಗಳ ಶಾಲಾ ಅಭಿಮಾನಿಗಳ ಪ್ರೀತಿಯ ಸಹಕಾರ ಅತಿ ಅಗತ್ಯ. ಆಗ ಶಾಲೆಯ ಸಮಾಜದ ಒಂದು ಉತ್ತಮ ಆಭರಣವಾಗಿ ಮೂಡಿ ಬಂದು ಭಾರತ ದೇಶದ ಪ್ರಗತಿಯಲ್ಲಿ ಮಹತ್ತರ ಕೊಡುಗೆಯನ್ನು ನೀಡಲು ಸಾಧ್ಯ ಎಂದು ವಂದನೀಯ ಭಗಿನಿ ಫ್ಲಾವಿಯ ವಿಲ್ಮಾ ಬಿ.ಎಸ್ ರವರು ಬಜಪೆಯ ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯ ವಜ್ರ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ಪೀಠದಿಂದ ನುಡಿದರು.

ಸಮಾರಂಭದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮುಕೇನ ಉದ್ಯಮಿ ಶ್ರೀ ರಾಯ್ ಪ್ರಕಾಶ್ ಸಿಮ್ಸನ್ ಗನ್ ಹೌಸ್ ಬಜ್ಪೆ ರವರು ನೆರವೇರಿಸಿ ಹೋಲಿ ಫ್ಯಾಮಿಲಿ ಪ್ರೌಢಶಾಲೆ ಬಜ್ಪೆಯ ಪರಿಸರದಲ್ಲಿ ಹೆಸರು ಪಡೆದ ಗುಣಮಟ್ಟದ ಶಿಕ್ಷಣ ನೀಡುವ ಶಾಲೆ. ಶಾಲೆಯ ಅಭಿವೃದ್ಧಿಗೆ ನಮ್ಮ ಸಹಕಾರ ಪೂರ್ಣ ಪ್ರಮಾಣದಲ್ಲಿ ನೀಡುತ್ತೇವೆ ಎಂದು ತಿಳಿಸಿದರು.

ವಜ್ರ ಮಹೋತ್ಸವದ ಸಾರ್ಥಕ 60 ಸಂತ್ಸರಗಳ ಲಾಂಛನವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಇನಾಯತ್ ಅಲಿ ಅವರು ನೆರವೇರಿಸಿ ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ನಾಯಕರಾಗಿ ಮೂಡಿ ಬರಬೇಕು ಗುಣಮಟ್ಟದ ನಾಯಕರಾಗಿ ಮೂಡಿ ಬರಬೇಕಾದರೆ ಶಾಲೆಯಲ್ಲಿ ನೀಡುವ ಶಿಕ್ಷಣ ಗುಣಮಟ್ಟದ ಮೌಲ್ಯದಾರಿತ ಯೋಜನೆ ಆಗಿರಬೇಕು ಆಗ ಮಾತ್ರ ಮಕ್ಕಳು ಪರಿಪೂರ್ಣ ಶಿಕ್ಷಣವನ್ನು ಪಡೆದು ಉತ್ತಮ ನಾಯಕರಾಗುತ್ತಾರೆ. ಹೆಜ್ಜೆಯನ್ನು ಇಟ್ಟು ಸಾರ್ಥಕ 60 ಸಂವತ್ಸರಗಳನ್ನು ದಾಟಿ ವಜ್ರ ಮಹೋತ್ಸವ ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಶಾಲೆಯ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ದ್ವಿತೀಯ ಜಾನ್ ಪಾವ್ಲ್ ದೇವಾಲಯ ಬಜಪೆ ಇದರ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ರೋಷನ್ ಲೋಬೊರವರು ಆಶೀರ್ವಚನ ಕಾರ್ಯಕ್ರಮ ನೀಡಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸ್ಥಳೀಯ ನಜರತ್ ಕಾನ್ವೆಂಟಿನ ಸುಪೀರಿಯರ್ ವಂದ¤ಯ ಭಗಿನಿ ಫ್ಲೋರಿನ್ ಜ್ಯೋತಿ ಬಿ.ಎಸ್ ಉಪಸ್ಥಿತರಿದ್ದರು. ಈ ಸಂದರ್ಭ ಶಾಲಾ ಸಂಚಾಲಕಿಯವರು ವಜ್ರ ಮಹೋತ್ಸವದ ಮನವಿ ಪತ್ರವನ್ನು ಬಿಡುಗಡೆಗೊಳಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ಜೆಸ್ಸಿ ಪ್ರೀಮರವರು ಪ್ರಾಸ್ತವಿಕ ನುಡಿಗಳನ್ನು ನುಡಿದು ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕ ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು. ಶಾರೀರಿಕ ಶಿಕ್ಷಕ ಶ್ರೀ ಪ್ರಶಾಂತ್ ರವರು ವಂದಿಸಿದರು . ಶಾಲಾ ಶಿಕ್ಷಕಿಯರಾದ ಲಿಲ್ಲಿ ಮಿನೇಜಸ್, ಯಶೋಧ ಸಿ.ಎಚ್, ಶ್ರೀಮತಿ ಶ್ರೀಧನ್ಯ, ಶ್ರೀಮತಿ ಗೀತಾಂಬ, ಕುಮಾರಿ ಶ್ರೀಜಾ ,ಶ್ರೀಮತಿ ನಯನ, ಶ್ರೀಮತಿ ರೇಣುಕಾ ಸಹಕರಿಸಿದ್ದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.