Media Release

Mangaluru, April 5, 2025 : A delegation of Christians under the leadership of Catholic Sabha Mangalore Pradesh (R.) President Alvin D'Souza submitted a request to D.K. District In-charge Minister Dinesh Gundu Rao to cancel the assessment of the SSLC exam during the Christian Holy Week.

ಕ್ರೈಸ್ತರ ಪವಿತ್ರವಾರದಲ್ಲಿ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನವನ್ನು ರದ್ದುಗೊಳಿಸಲು ದ. ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರು ಆಲ್ವಿನ್ ಡಿ ಸೋಜಾರವರ ನಿಯೋಗ ಓತ್ತಾಯ

ಜಗತ್ತಿನಾದ್ಯಂತ ಕ್ರೈಸ್ತ ಸಮುದಾಯವು ಈ ಮಾಸವನ್ನು, ಪವಿತ್ರ ಮಾಸವೆಂದು ಪರಿಗಣಿಸಿ ಎರಡು ಸಾವಿರ ವರ್ಷಗಳ ಹಿಂದಿನಿಂದಲೂ ಆಚರಿಸಿ ಸಿಕೊಂಡು ಬಂದಿರುತ್ತೇವೆ, ಈ ತಿಂಗಳಲ್ಲಿ 40 ದಿವಸ ಉಪವಾಸವನ್ನು ನಡೆಸಿ ಚರ್ಚುಗಳಲ್ಲಿ ಪ್ರಾರ್ಥನೆ ಯನ್ನು ನಡೆಸುತ್ತಾ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸುವ ಸಂಪ್ರದಾಯವನ್ನು ಹಿಂದಿನಿಂದಲೂ ನಡೆದುಕೊಂಡು ಬoದಿದೆ. ಶುಕ್ರವಾರ ಗುಡ್ ಫ್ರೈಡೇ ಈ ದಿನ ನಾವು ನಂಬಿರುವಂತ ಯೇಸು ಕ್ರಿಸ್ತರನ್ನು ಶಿಲುಬೆಗೆ ಏರಿಸಿದ ದಿನ ಗುರುವಾರವು ಶುಭ ಗುರುವಾರ ಹಾಗೇ ಆದಿತ್ಯವಾರದಂದು ಯೇಸು ಕ್ರಿಸ್ತರು ಪುನರ್ ಜನ್ಮವಾದ ದಿನವನ್ನು ನಾವು ಆಚರಿಸಿಕೊಂಡು ಬಂದಿರುತ್ತೇವೆ, ಈ ವರ್ಷ ಎಸೆಸೆಲ್ಸಿ ಪರೀಕ್ಷೆ ಮುಗಿದು, ಅದರ ಮೌಲ್ಯ ಮಾಪನ ವನ್ನು 15-03-2025 ರಿಂದ ಹತ್ತು ದಿನ ಹಮ್ಮಿಕೊಂಡಿರುವುದು ಇಡೀ ಕ್ರೈಸ್ತ ಸಮುದಾಯಕ್ಕೆ ಬೇಸರ ತಂದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಕ್ರೈಸ್ತ ಶಿಕ್ಷಕರು ಇರುವುದರಿಂದಾಗಿ ಅವರಿಗೆ ಮೌಲ್ಯಮಾಪನಕ್ಕೆ ಹೋದರೆ ಈಸ್ಟರ್ ಹಬ್ಬ, ಗುಡ್ ಫ್ರೈಡೇ, ಶುಭ ಗುರುವಾರವನ್ನು ಆಚರಿಸಲು ಅಸಾಧ್ಯವಾಗಿರುವುದರಿಂದ ಈ ದಿನಾಂಕದಂದು ಅವರಿಗೆ ರಿಯಾಯತಿಯನ್ನು ಕೇಳಿಕೊಂಡು ನಮ್ಮ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ ಡಿ ಸೋಜಾರವರ ನೇತತ್ವದಲ್ಲಿ ನಿಯೋಗವು ತೆರಳಿ ಈ ದಿನದಂದು ಕ್ರೈಸ್ತ ಶಿಕ್ಷಕರಿಗೆ ರಜೆ ನೀಡಬೇಕೆಂದು ಕೇಳಿಕೊಂಡಾಗ ಅವರು ತಕ್ಷಣ ನಮ್ಮ ಮನವಿಗೆ ಸ್ಪಂದಿಸಿ ಬೋರ್ಡ್ ಡೈರೆಕ್ಟರ್ ರವರಿಗೆ ಬೆಂಗಳೂರಿಗೆ ಕರೆ ಮಾಡಿ ಅವರಿಗೆ ಈ ದಿನದಂದು ಗುರುವಾರ ಮತ್ತು ಶುಕ್ರವಾರದಂದು ರಜೆಯನ್ನು ನೀಡಬೇಕೆಂದು ಕೇಳಿಕೊಂಡಾಗ ಅವರು ಡಿಡಿಪಿಯಲ್ಲಿ ಹಾಗೂ ಅಧಿಕಾರಿ ವರ್ಗದವರಲ್ಲಿ ಸಮಾಲೋಚಿಸಿ ಈ ರಜೆಯನ್ನು ನೀಡುವುದಾಗಿ ಭರವಸೆ ಯನ್ನು ನೀಡಿರುತ್ತಾರೆ. ಆದ್ದರಿಂದ ಮಾನ್ಯ ದಿನೇಶ್ ಗುಂಡೂರಾವ್ ವರಿಗೆ ನಾವು ಈ ಮೂಲಕ ಅಭಿನಂದನೆಯನ್ನು ಸಲ್ಲಿಸು ತ್ತಿದ್ದೇವೆ.

ಮನವಿ ಸಲ್ಲಿಸುವಾಗ ಉಪಸ್ಥಿತಿ ಇದ್ದವರು ಶ್ರೀ ಆಲ್ವಿನ್ ಡಿ ಸೋಜಾ, ಅಧ್ಯಕ್ಷರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.),ಮಾಜಿ ಅಧ್ಯಕ್ಷರಾದ ಪಾವ್ಲ್ ರೋಲ್ಫಿ ಡಿ ಕೋಸ್ತಾ, ಫೆಜಾರ್ ವಲಯ ಅಧ್ಯಕ್ಷರಾದ ಸಂತೋಷ್ ಡಿ ಸೋಜಾ ಹಾಗೂ ಸಿಟಿ ವಲಯ ಅಧ್ಯಕ್ಷರಾದ ಅರುಣ್ ಡಿ ಸೋಜಾ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಯಾದ ಆಲ್ವಿನ್ ಮೊಂತೆರೋರವರು ಉಪಸ್ಥಿತರಿದ್ದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.