Media Release

Mangaluru, Aug 28, 2024 : In 'Film Sobhann' Konkani Film Festival organized by Mandd Sobhann, a film screening for Konkani children was held at Bharat Cinemas on 28th August here. Apsaradhara movie directed by Dr. K. Ramesh Kamath was screened.

ಫಿಲ್ಮ್ ಸೊಭಾಣ್ ನಲ್ಲಿ ಮಕ್ಕಳ ಚಿತ್ರ ಅಪ್ಸರಧಾರ

ಮಾಂಡ್ ಸೊಭಾಣ್ ಆಯೋಜಿಸಿದ `ಫಿಲ್ಮ್ ಸೊಭಾಣ್’ ಕೊಂಕಣಿ ಚಲನ ಚಿತ್ರೋತ್ಸವದಲ್ಲಿ ಕೊಂಕಣಿ ಮಕ್ಕಳಿಗಾಗಿ ಚಲನಚಿತ್ರ ಪ್ರದರ್ಶನ ಆಗಸ್ಟ್ 28 ರಂದು ಭಾರತ್ ಸಿನೆಮಾಸ್ ಇಲ್ಲಿ ನಡೆಯಿತು. ಡಾ ಕೆ. ರಮೇಶ್ ಕಾಮತ್ ನಿರ್ದೇಶನದ ಅಪ್ಸರಧಾರ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಈ ಚಿತ್ರದ ಕೆಲಭಾಗಗಳನ್ನು ಈಜಿಪ್ಟ್ ನಲ್ಲಿ ಚಿತ್ರೀಕರಿಸಿದ್ದು, ತ್ರಿಡಿ ತಾಂತ್ರಿಕತೆ ಉಪಯೋಗಿಸಿದ ಮೊದಲ ಕೊಂಕಣಿ ಚಿತ್ರ ಇದಾಗಿದೆ. ಈ ಸಂದರ್ಭದಲ್ಲಿ ಡಾ ಕಾಮತ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ನವೀನ್ ಲೋಬೊ, ರೊನಿ ಅರುಣ್ ಹಾಗೂ ವಿಕಾಸ್ ಲಸ್ರಾದೊ ಉಪಸ್ಥಿತರಿದ್ದರು. ಈ ಚಿತ್ರೋತ್ಸವದಲ್ಲಿ ಭಾಗವಹಿಸಲು ಆಯ್ಕೆಯಾದ ಕುಲಶೇಖರದ ಸಂತ ಜೋಸೆಫ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಚಲನಚಿತ್ರವನ್ನು ವೀಕ್ಷಿಸಿ ಸಂತಸಪಟ್ಟರು.

ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಈ ಚಿತ್ರೋತ್ಸವವು ಆಗಸ್ಟ್ 23 ರಿಂದ ಸೆಪ್ಟೆಂಬರ್ 14 ರವರೆಗೆ ನಡೆಯುತ್ತಿದ್ದು, ಕರ್ನಾಟಕ ಹಾಗೂ ಗೋವಾದ ಸುಮಾರು 25 ಚಲನಚಿತ್ರಗಳು, 5 ಕಿರುಚಿತ್ರಗಳು ಹಾಗೂ 2 ಮಕ್ಕಳ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

Tags:

Latest News

Latest News

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.