Media Release

Kinnigoli, July 30 : Catholic Sabha Mangalore Pradesh (R.) Mangalore North Deanery, under its leadership and in collaboration with all all the Catholic Sabha units of the North Deanery, organised a felicitation program for Shri Ivan Dsouza who was elected as a member of the Legislative Council for the second time, at Kinnigoli Church Sabha Bhavan on 28th July 2024 at 04.00 pm.


ಮಂಗಳೂರು ಉತ್ತರ ವಲಯದ ವತಿಯಿಂದ ಸನ್ಮಾನ್ಯ ಐವನ್‌ ಡಿಸೋಜಾರವರಿಗೆ ಅಭಿನಂದನಾ ಕಾಯಕ್ರಮ

ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಮಂಗಳೂರು ಉತ್ತರ ವಲಯ, ಇದರ ಮುಂದಾಳತ್ವದಲ್ಲಿ, ಉತ್ತರ ವಲಯದ ಎಲ್ಲಾ ಕಥೊಲಿಕ್ ಸಭಾ ಘಟಕಗಳ ಸಹಯೋಗದಲ್ಲಿ, ವಿಧಾನ ಪರಿಷತ್ತಿನ ಸದಸ್ಯರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಸನ್ಮಾನ್ಯ ಶ್ರೀ ಐವನ್ ಡಿಸೋಜರವರಿಗೆ, ಅಭಿನಂದನಾ ಕಾರ್ಯಕ್ರಮವನ್ನು ಕಿನ್ನಿಗೋಳಿ ಚರ್ಚ್ ಸಭಾ ಭವನದಲ್ಲಿ 28.07.2024 ಸಂಜೆ 04.00 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.

ಶ್ರೀ ಐವನ್ ಡಿಸೋಜಾರವರನ್ನು ಆತ್ಮೀಯವಾಗಿ ಬರಮಾಡಿಕೊಂಡು, ಮೆರವಣಿಗೆಯೊಂದಿಗೆ ಸಭಾ ಭವನಕ್ಕೆ ಕರೆತರಲಾಯಿತು.

ನಂತರ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯ ಅಧ್ಯಕ್ಷರಾದ ಮೆಲ್ರೀಡ ಜೇನ್ ರೊಡ್ರಿಗಸ್ ವಹಿಸಿದ್ದರು. ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸರ್ವರನ್ನೂ ಸ್ವಾಗತಿಸಿದರು.

ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯದ ಆಧ್ಯಾತ್ಮಿಕ ನಿರ್ದೇಶಕರಾಗಿರುವ ಅತೀ ವಂದನೀಯ ಗುರು ಓಸ್ವಾಲ್ಡ್ ಮೊಂತೆರೊ ಹಾಗೂ ಕಿನ್ನಿಗೋಳಿ ಚರ್ಚ್ ಧರ್ಮ ಗುರುಗಳಾದ ವಂದನೀಯ ಫಾ ಜೋಕಿಂ ಫೆರ್ನಾಂಡಿಸ್ ರವರು ಐವನ್‌ ಡಿಸೋಜರವರಿಗೆ ಶುಭ ಕೋರಿದರು.

ಕಾಯಕ್ರಮದಲ್ಲಿ ಸನ್ಮಾನಿತರಾದ ಐವನ್‌ ಡಿಸೋಜರವರು ಮಾತನಾಡಿ ಕನ್ನಡ ಮಾಧ್ಯಮ ಶಾಲೆಗೆ, ಸರಕಾರಿ ಆಸ್ಪತ್ರೆ ಅಭಿವೃದ್ದಿಗೆ ಸುಮಾರು 15 ಕೋಟಿ ರುಪಾಯಿ ಪ್ರಸ್ತುತ ಇಡಲಾಗಿದೆ. ಶೀಘ್ರವೇ ನಿಯಮಾವಳಿ ಬರಲಿದೆ ಎಂದು ಹೇಳಿದರು.

ಕಿನ್ನಿಗೋಳಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ವಿಲಿಯಂ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಉತ್ತರ ವಲಯ ಕಾರ್ಯದರ್ಶಿ ಶ್ರೀಮತಿ ಶಾಂತಿ ಮೇಬಲ್ ಮಾರ್ಟಿಸ್, ಖಜಾಂಚಿ ಶ್ರೀ ಜೇಮ್ಸ್ ಲೋಬೊ, ನಿಕಟ ಪೂರ್ವ ಅಧ್ಯಕ್ಷ ಶ್ರೀ ಫ್ರಾನ್ಸಿಸ್ ಸೆರಾವೊ, ಕಿನ್ನಿಗೋಳಿ ಘಟಕ ಅಧ್ಯಕ್ಷ ಹಾಗೂ ವಲಯ ರಾಜಕೀಯ ಸಂಚಾಲಕರಾಗಿರುವ ಶ್ರೀಮತಿ ಗ್ರೆಟ್ಟಾ ಫೆರ್ನಾಂಡಿಸ್, ಕಿನ್ನಿಗೋಳಿ ಘಟಕ ಕಾರ್ಯದರ್ಶಿ ಶ್ರೀ ವಿಲಿಯಂ ಸಿಕ್ವೇರ, ಕಿನ್ನಿಗೋಳಿ ಘಟಕ ರಾಜಕೀಯ ಸಂಚಾಲಕ ಶ್ರೀ ಪ್ರಕಾಶ್ ಡಿಸೋಜ ಉಪಸ್ಥಿತರಿದ್ದರು.

ಕಥೊಲಿಕ್ ಸಭಾ ವತಿಯಿಂದ ಶ್ರೀ ಸ್ಟ್ಯಾನಿ ಮಿರಾಂದಾರವರು ಸನ್ಮಾನ್ಯ ಐವನ್ ಡಿಸೋಜಾರವರಿಗೆ ಶುಭಕೋರಿದರು. ಶ್ರೀಮತಿ ಗ್ರೆಟ್ಟಾ ಡಿಸೋಜಾರವರು ಧನ್ಯವಾದ ಸಮರ್ಪಿಸಿದರು. ಡಾ‌. ಫ್ರೀಡ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಹಲವರು ತಮ್ಮ ಬೇಡಿಕೆಗಳನ್ನು ಮನವಿ ರೂಪದಲ್ಲಿ ಶ್ರೀ ಐವನ್ ಡಿಸೋಜಾರಿಗೆ ನೀಡಿದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.