ನಮ್ಮ ಜೀವನ ಎನ್ನುವುದು ಒಂದು ಸುಂದರವಾದ ಹೂವಿನ ತೋಟ. ಈ ತೋಟದಲ್ಲಿ ಸದಾ ಸುಂದರವಾದ ಹೂಗಳು ಅರಳಿ ನಗುತ್ತಿರಬೇಕು ಎಂದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವು ಮುಖ್ಯವಾಗಿರುತ್ತದೆ. ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ದೈಹಿಕ ಕಾಯಿಲೆ ಮಾನಸಿಕ ಆರೋಗ್ಯವನ್ನು ಕೆಡಿಸಿದರೆ, ಮಾನಸಿಕ ಕಾಯಿಲೆ ದೈಹಿಕ ಆರೋಗ್ಯವನ್ನು ಕೆಡಿಸುತ್ತದೆ.
ನಾವು ಯುವಜನತೆ ಹಾಗೂ ಮಕ್ಕಳ ಬಗ್ಗೆ ಮಾತನಾಡವುದಾದರೆ, ಇತ್ತೀಚಿನ ದಿನಗಳಲ್ಲಿ ನಾವು ಹಲವಾರು ಪ್ರಕರಣಗಳನ್ನು ನೋಡಬಹುದಾಗಿದೆ. ದಿನದಿಂದ ದಿನಕ್ಕೆ, ಶಾಲಾ-ಕಾಲೇಜುಗಳಲ್ಲಿ, ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಯನ್ನು ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಾ ಹೋಗುತ್ತಿವೆ. ಸಣ್ಣಸಣ್ಣ ವಯಸ್ಸಿನ ಮಕ್ಕಳು ಕ್ಷಣ ಮಾತ್ರದಲ್ಲಿ ಸಣ್ಣ ವಿಷಯಕ್ಕೆ ಏನೂ ಯೋಚಿಸದೇ ಆ ಸಮಸ್ಯೆಯ ಬಗ್ಗೆ ಹೆತ್ತವರೊಂದಿಗೆ ಚಚಿ೯ಸದೆ ಶೀಘ್ರವಾಗಿ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ಮುಂದಾಗುತ್ತಾರೆ. ಈ ರೀತಿಯಾಗಿ ಯುವಜನತೆ ಹಾಗೂ ಮಕ್ಕಳು ನಿಧಾ೯ರ ತೆಗೆದುಕೊಳ್ಳಲು ಕಾರಣವೇನು? ಈ ರೀತಿಯ ಸಮಸ್ಯೆಗಳು ಏಕೆ ಹೆಚ್ಚಾಗುತ್ತಿದೆ? …. ನಾವೆಲ್ಲರೂ ಯೋಚಿಸಬೇಕಾಗಿದೆ…
ಮೊದಲು ,ಹೆತ್ತವರು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಧೈರ್ಯವನ್ನುತುಂಬಬೇಕು. ಮಾನಸಿಕವಾಗಿ ಅವರನ್ನು ಬಲಿಷ್ಠರನ್ನಾಗಿ ಮಾಡಬೇಕು. ಸಮಸ್ಯೆಯನ್ನು ಎದುರಿಸಲು ಆತ್ಮವಿಶ್ವಾಸವನ್ನು ಬೆಳೆಸಬೇಕು. ತನ್ನ ಮನಸ್ಸಿನಲ್ಲಿ ಬರುವಂತಹ ಯೋಚನೆಗಳು ಅಥವಾ ಸಮಸ್ಯೆಗಳನ್ನು ತಮ್ಮಲ್ಲಿ ಹಂಚಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಬೇಕು.
ಅವರೊಂದಿಗೆ ಸ್ನೇಹಿತರಾಗಿದ್ದು ಮಾತನಾಡಿ ಅವರ ಮನಸ್ಥಿತಿಯನ್ನುಅರಿತುಕೊಳ್ಳುವುದರ ಜೊತೆಗೆ ಅವರ ಮನಸ್ಥಿತಿಯನ್ನುಸರಿಪಡಿಸಬೇಕು. ಇದೇ ರೀತಿಯ ವಾತಾವರಣ ಶಾಲೆಯಲ್ಲಿಯೂ ಸೃಷ್ಟಿಸಿಯಾದಾಗ ಅವರ ಮಾನಸಿಕ ಆರೋಗ್ಯವು ಉತ್ತಮ ಮಟ್ಟದಲ್ಲಿ ಇದ್ದು ಸಮಸ್ಯೆಗಳನ್ನು ಎದುರಿಸುವ ಮನಸ್ಥೈಯ್ಯ೯ವನ್ನುಅವರು ಹೊಂದಿರುತ್ತಾರೆ.
ಆಗ ಈ ಸಮಸ್ಯೆ ಗಳ, ಈ ಪ್ರಕರಣಗಳ ಸಂಖ್ಯೆ ಕಡಿಮೆಯಾಗಬಹುದು ಎನ್ನುವುದು ನನ್ನ ಅನಿಸಿಕೆ.
- ಪ್ರಿಯ. ಪಿ
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು