Media Release

Panir - Ullal, Sep 4 : Public awareness campaign against drugs was launched at Our Lady of Mercy Church, Panir on Sunday, September 3, 2023.


"ಮಾದಕ ದ್ರವ್ಯದ ವಿರುದ್ಧ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ "

ಉಳ್ಳಾಲ, ಪಾನೀರ್, ಸೆಪ್ಟೆಂಬರ್ 03 : ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಆಗಿರುವ ಡಾಕ್ಟರ್ ಪೀಟರ್ ಪೌಲ್ ಸಲ್ದಾನರವರ ಪ್ರಕಟಣೆಯಂತೆ ಸೆಪ್ಟೆಂಬರ್ ತಿಂಗಳನ್ನು ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯನ್ನಾಗಿ ಆಚರಿಸಬೇಕು ಎಂಬುದಾಗಿ ಕರೆ ನೀಡಿದರು. ಈ ನಿಟ್ಟಿನಲ್ಲಿ ,ಮಾದಕ ದ್ರವ್ಯ ಸೇವನೆ ವಿರೋಧಿಸಿ ಜನಜಾಗೃತಿ ಅಭಿಯಾನದ ಚಾಲನೆಯನ್ನು ಭಾನುವಾರದ ಬೆಳಗ್ಗಿನ ಬಲಿಪೂಜೆಯ ನಂತರ ಪಾನೀರ್ ಧರ್ಮಕೇಂದ್ರದ ಗುರುಗಳಾದ, ವಂದನೀಯ ವಿಕ್ಟರ್ ಡಿಮೆಲ್ಲೊರವರು ಉರಿಯುತ್ತಿರುವ ಅಗ್ನಿಗೆ ನಕಲಿ ಮಾದಕ ವಸ್ತುಗಳನ್ನು ಹಾಕಿ ಸುಡುವುದರ ಮೂಲಕ ವಿದ್ಯುಕ್ತವಾಗಿ ಡ್ರಗ್ಸ್ ವಿರೋಧಿ ಜಾಗೃತಿ ಮಾಸಕ್ಕೆ ಚಾಲನೆ ನೀಡಿದರು . ಸರ್ವರೂ ಸರಪಳಿ ಮಾದರಿಯಲ್ಲಿ ಒಬ್ಬರಿಗೊಬ್ಬರು ಕೈಗಳನ್ನು ಹಿಡಿದುಕೊಂಡು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ದಯಾಮಾತೆ ದೇವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಸರಿತ ಡಿಸೋಜಾ , ಕಾರ್ಯದರ್ಶಿಗಳಾದ ಶ್ರೀಮತಿ ಗ್ರೇಟ್ಟ ಡಿಕುನ್ನ, ಮಂಗಳೂರು ಕಥೋಲಿಕ್ ಸಭೆಯ ಅಧ್ಯಕ್ಷರಾದ ಶ್ರೀಯುತ ಅಲ್ವಿನ್ ಡಿಸೋಜಾ, ಪಾನೀರ್ ಕಥೋಲಿಕ್ ಸಭೆಯ ಅಧ್ಯಕ್ಷರಾದ ಉರ್ಬನ್ ಫೆರಾವೋ, ಎಸ್.ವಿ.ಪಿ ಸಭೆಯ ಅಧ್ಯಕ್ಷರಾದ ಶ್ರೀಯುತ ಫ್ರಾಂಕಿ ಕುಟ್ಟಿನ , ವಿವಿಧ ಸಂಘ ಸಂಸ್ಥೆಯ ಮತ್ತು ಐ.ಸಿ.ವೈ.ಎಂ ಹಾಗೂ ವೈ.ಸಿ.ಎಸ್ ನ ಪದಾಧಿಕಾರಿಗಳು ಮತ್ತು ಸದಸ್ಯರು, ಏಳು ಕಾನ್ವೆಂಟಿನ ಧರ್ಮಭಗಿನಿಯರು, ಎಲ್ಲಾ ವಾರ್ಡಿನ ಗುರಿಕಾರರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಭೆಯ ನಿರೂಪಣೆಯನ್ನು 21 ಆಯೋಗದ ಸಂಚಾಲಕರಾದ ಶ್ರೀಯುತ ರೊನಾಲ್ಡ್ ಡಿಸೋಜಾ ನಡೆಸಿದರು.

ಸರ್ವ ಕ್ರೈಸ್ತ ಭಕ್ತಾದಿಗಳು ಡ್ರಗ್ಸ್ ವಿರೋಧಿ ಮಾಸಚಾರಣೆ ಚಾಲನಾ ಕಾರ್ಯಕ್ಕೆ ಸಾಕ್ಷಿಗಳಾದರು.


"ಮಾದಕ ದ್ರವ್ಯ ಸೇವನೆ ವಿರೋಧಿಸಿ ಜನ ಜಾಗೃತಿ ಅಭಿಯಾನ "

ದೇರಳಕಟ್ಟೆ,ಉಳ್ಳಾಲ , ಸೆಪ್ಟೆಂಬರ್ 03 : ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಆಗಿರುವ ಡಾಕ್ಟರ್ ಪೀಟರ್ ಪೌಲ್ ಸಲ್ದಾನ ರವರ ಪ್ರಕಟಣೆಯಂತೆ ಸೆಪ್ಟೆಂಬರ್ ತಿಂಗಳನ್ನು ಮಾದಕ ದ್ರವ್ಯ ವಿರೋಧಿ ಮಾಸಾಚರಣೆಯನ್ನಾಗಿ ಆಚರಿಸಬೇಕು ಎಂಬುದಾಗಿ ಕರೆ ನೀಡಿದರು. ಈ ನಿಟ್ಟಿನಲ್ಲಿ ,ಮಾದಕ ದ್ರವ್ಯ ಸೇವನೆ ವಿರೋಧಿಸಿ ಜನಜಾಗೃತಿ ಅಭಿಯಾನವನ್ನು ದಯಾಮಾತೆ ದೇವಾಲಯ ಪಾನೀರು ಇಲ್ಲಿನ ಭಕ್ತಾದಿಗಳು ವಿವಿಧ ಸ್ಥಳಗಳ ಮೂಲಕ ಕಾಲ್ನಡಿಗೆ ಜಾಥದೊಂದಿಗೆ ದೇರಳಕಟ್ಟೆಯ ಮೈದಾನದಲ್ಲಿ ಸೇರಿ ಜನ ಜಾಗೃತಿ ಸಭೆಯನ್ನು ನಡೆಸಿದರು. ಈ ಜಾಗೃತಿ ಸಭೆಯಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಉದ್ದೇಶಿಸಿ ಮಾತನಾಡುತ್ತಾ, ಸರ್ವರು ಡ್ರಗ್ಸ್ ವಿರುದ್ಧ ಜಾಗೃತರಾಗಬೇಕು ಮತ್ತು ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತಹ ವಿಷಯಗಳು ತಿಳಿದಲ್ಲಿ ಪೊಲೀಸರಿಗೆ ತಕ್ಷಣ ಮಾಹಿತಿಗಳನ್ನು ನೀಡಬೇಕು ಎಂಬುದಾಗಿ ತಿಳಿಸಿದರು. ದಯಾಮಾತೆ ದೇವಾಲಯ ಪಾನೀರು ಇದರ ಧರ್ಮಕೇಂದ್ರದ ಗುರುಗಳಾದ ವಿಕ್ಟರ್ ಡಿಮೆಲ್ಲೋ ರವರು ಸಮಾಜದ ಸ್ವಾಸ್ಥ್ಯವನ್ನು ಉಳಿಸುವಂತೆ ಪ್ರೇರಣಾತ್ಮಕ ನುಡಿಗಳನ್ನಾಡಿದರು. ಸಭೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಲೀಡಿಯ ಲೋಭೋರವರು ಮಾತನಾಡಿ ಡ್ರಗ್ಸ್ ವಿರುದ್ಧ ನಮ್ಮ ಅಭಿಯಾನವು ನಿರಂತರವಾಗಿ ನಡೆಯಬೇಕು. ಸಣ್ಣ ವಯಸ್ಸಿಗೆ ಬಲಿಯಾಗುತ್ತಿರುವ ನಮ್ಮ ಮಕ್ಕಳನ್ನು ಕಾಪಾಡಿ ಅವರ ಭವಿಷ್ಯವನ್ನು ರೂಪಿಸಬೇಕು ಎಂದು ಕಳಕಳಿಯ ನುಡಿಗಳನ್ನಾಡಿದರು.

ಜಾಗೃತಿ ಸಭೆಯಲ್ಲಿ ದಯಮಾತೆ ದೇವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಸರಿತ ಡಿಸೋಜಾ ,ಕಾರ್ಯದರ್ಶಿಗಳಾದ ಶ್ರೀಮತಿ ಗ್ರೇಟ್ಟ ಡಿಕುನ್ನ, ಮಂಗಳೂರು ಕಥೋಲಿಕ್ ಸಭೆಯ ಅಧ್ಯಕ್ಷರಾದ ಶ್ರೀಯುತ ಅಲ್ವಿನ್ ಡಿಸೋಜಾ, ಪಾನೀರು ಕಥೋಲಿಕ್ ಸಭೆಯ ಅಧ್ಯಕ್ಷರಾದ ಉರ್ಬನ್ ಫೆರಾವೋ, ಎಸ್. ವಿ. ಪಿ ಸಭೆಯ ಅಧ್ಯಕ್ಷರಾದ ಶ್ರೀಯುತ ಫ್ರಾಂಕಿ ಕುಟ್ಟಿನ ,ವಿವಿಧ ಸಂಘ ಸಂಸ್ಥೆಯ ಮತ್ತು ಐ.ಸಿ.ವೈ.ಎಂ ಹಾಗೂ ವೈ.ಸಿ.ಎಸ್ ನ ಪದಾಧಿಕಾರಿಗಳು ಮತ್ತು ಸದಸ್ಯರು, ಏಳು ಕಾನ್ವೆಂಟಿನ ಧರ್ಮ ಭಗಿನಿಯರು, ಎಲ್ಲಾ ವಾರ್ಡಿನ ಗುರಿಕಾರರು ಮತ್ತು ಪ್ರತಿನಿಧಿಗಳು ಉಪಸ್ಥಿತರಿದ್ದರು. ಸರ್ವರಿಗೂ ಮಾದಕ ದ್ರವ್ಯದ ವಿರುದ್ಧ ಪ್ರತಿಜ್ಞಾವಿಧಿಯನ್ನು ಹಮ್ಮಿಕೊಂಡು ಘೋಷಣಾ ಗೀತೆಯನ್ನು ಹಾಡಲಾಯಿತು.ಸಭೆಯನ್ನು ರಾಷ್ಟ್ರಗೀತೆಯೊಂದಿಗೆ ಅಂತ್ಯಗೊಳಿಸಲಾಯಿತು.

ಸಭೆಯ ನಿರೂಪಣೆಯನ್ನು 21 ಆಯೋಗದ ಸಂಚಾಲಕರಾದ ಶ್ರೀಯುತ ರೊನಾಲ್ಡ್ ಡಿಸೋಜಾ ನಡೆಸಿದರು ಮತ್ತು ವಂದನಾರ್ಪಣೆಯನ್ನು ಸಾಮಾಜಿಕ ಆಯೋಗದ ಸಂಯೋಜಕರಾದ ಶ್ರೀಯುತ ಕ್ಲೇವಿನ್ ವಿಲ್ಸನ್ ಲಸ್ರಾದೋ ನೆರವೇರಿಸಿದರು.

ಸರ್ವ ಕ್ರೈಸ್ತ ಭಕ್ತಾದಿಗಳು ಮತ್ತು ಸ್ಥಳೀಯರು ಮಾದಕ ದ್ರವ್ಯದ ವಿರುದ್ಧ ಜನ ಜಾಗೃತಿ ಜಾಥಕ್ಕೆ ಸಾಕ್ಷಿಗಳಾದರು.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.