Media Release
Mangaluru, March 18, 2025 : The Siddhi Samavesha organized by Karnataka Konkani Sahitya Academy was held on March 15th and 16th at Mundugud, Yellapur.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಸಿದ್ದಿ ಸಮಾವೇಶ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಸಿದ್ದಿ ಸಮಾವೇಶವು ಮಾರ್ಚ್ 15 ಮತ್ತು 16ರಂದು ಯಲ್ಲಾಪುರದ ಮುಂಡುಗೋಡಿನಲ್ಲಿ ಜರುಗಿತು.
ಮೊದಲನೆಯ ದಿನವಾದ ಮಾರ್ಚ್ 15ರಂದು ವಿಧಾನಪರಿಷತ್ ಶಾಸಕರಾದ ಶಾಂತರಾಮ ಸಿದ್ಧಿ, ಸಿದ್ದಿ ಬಾವುಟ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಲ್ಮೀಕಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಲಕ್ಷ್ಮಿ ಸಿದ್ದಿಯವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುಸ್ತಕ ಮಾರಾಟ ಮತ್ತು ಪ್ರದರ್ಶನದ ಮಳಿಗೆಯನ್ನು, ಸಿದ್ದಿ ವಸ್ತು ಪ್ರದರ್ಶನದ ಮಳಿಗೆ ಮತ್ತು ಸಿದ್ದಿ ಆಯರ್ವೇದಿಕ್ ಮಳಿಗೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಜ್ಞಾನಿ ಅಲ್ವಾರಿಸ್‌ರವರು ದಮಾಮ್ ಮತ್ತು ಗುಮಟ್ ಬಾರಿಸುವುದರ ಮೂಲಕ ಸಿದ್ದಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರಾಗಿ ಸಿದ್ದಿ ಮುಖಂಡರಾದ ಶ್ರೀ ಅಲ್ಲಿಸಾಬ್ ಮೆಹಬುಬಸಾಬ್ ದೇಸಾಯಿ, ಹಸನಬಾಬ ಮೊದಿನಸಾಬ ಹುಲಕೊಪ್ಪ, ಗೌರಿ ಸಿದ್ದಿ ಕಲ್ಲೇಶ್ವರ, ಲೊಯೊಲಾ ವಿಕಾಸ ಕೇಂದ್ರದ ನಿರ್ದೇಶಕರಾದ ಫಾ. ಮೆಲ್ವಿನ್ ಲೋಬೊ, ಅಕಾಡೆಮಿಯ ರಿಜಿಸ್ಟ್ರಾರ್ ಶ್ರೀ ರಾಜೇಶ್ ಜಿ. ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅಕಾಡೆಮಿ ಸದಸ್ಯರಾದ ಶ್ರೀ ನವೀನ್ ಲೋಬೊ. ಶ್ರೀ ಪ್ರಮೋದ್ ಪಿಂಟೊರವರು ಹಾಜರಿದ್ದರು. ಅಕಾಡೆಮಿ ಅಧ್ಯಕ್ಷರು ಶ್ರೀ ಜೋಕಿಂ ಸ್ಥಾನಿ ಆಲ್ವಾರಿಸ್‌ರವರು ಸ್ವಾಗತಿಸಿ, ರಿಜಿಸ್ಟ್ರಾರ್ ರಾಜೇಶ್ ಜಿ. ಯವರು ನೆರೆದವರನ್ನು ವಂದಿಸಿದರು. ಶ್ರೀ ಮೊದ್ದೇಶ್ ಸಿದ್ದಿಯರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಸ್ಟೀವನ್ ಕ್ವಾಡ್ರಸ್ ಸಮಾವೇಶದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕು. ಅನಂತ ಕೇಶವ ಸಿದ್ದಿ- ಸಿದ್ದಿ ಪರಂಪರೆ ಬಗ್ಗೆ ಮಾತಾನಾಡಿದರು. ಶ್ರೀಮತಿ ವೀಣಾ ಉದಯ್ ಸಿದ್ದಿಯವರು ಕಲೆ ಮತ್ತು ಸಂಸ್ಕೃತಿಯಲ್ಲಿ ಸಿದ್ದಿ ಬದುಕಿನ ಆಯಾಮಾಗಳ ಬಗ್ಗೆ, ಶ್ರೀಮತಿ ಪ್ರೇಮಾ ಅಜಯ ಬಿರ್ಜಿಯವರು ಸಿದ್ದಿಗಳ ಬದುಕು ನಿನ್ನೆ, ಇಂದು ಮತ್ತು ನಾಳೆ ಬಗ್ಗೆ ವಿಚಾರಗೋಷ್ಟಿ ನಡೆಸಿದರು. 21ನೇ ಶತಮಾನದಲ್ಲಿ ಸಿದ್ದಿಗಳಿಗೆ ಎದುರಾಗುತ್ತಿರುವ ಸಮಸ್ಯೆ/ ಸವಾಲು ಮತ್ತು ಸಕಾರಾತ್ಮಕ ಸಾಧ್ಯತೆಗಳ ಬಗ್ಗೆ ಶ್ರೀ ವಿಶ್ವನಾಥ ಗಣಪಾ ಸಿದ್ದಿ ಮತ್ತು ಶ್ರೀ ಸೂರ್ಯ ಪುಟ್ನಾ ಸಿದ್ದಿಯವರು ಮಾತಾನಾಡಿದರು. ವಿಚಾರಗೋಷ್ಠಿಯಲ್ಲಿ ಹಾಜರಿದ್ದವರು ಕಾರ್ಯಾಗಾರವನ್ನು ಆಸಕ್ತಿಯಿಂದ ಆಲಿಸಿ, ತಮಗಿದ್ದ ಅನುಮಾನಗಳನ್ನು ಬಗೆಹರಿಸಿದರು.
ಎರಡನೇ ದಿನವಾದ ಮಾರ್ಚ್ 16,2025 ಆದಿತ್ಯವಾರದಂದು ಮುಂಡುಗೋಡು ಬಸ್ ನಿಲ್ದಾಣದ ಬಳಿಯಿರುವ ಪರಿವೀಕ್ಷಣಾ ಕೇಂದ್ರದಿಂದ, ಲೊಯೊಲಾ ವಿಕಾಸ ಕೇಂದ್ರದವರೆಗೆ 1.5 ಕಿ.ಮೀ ವ್ಯಾಪ್ತಿಯಲ್ಲಿ ವಿವಿಧ ಕಲಾತಂಡಗಳಿಂದ ವೈಭವಯುತವಾಗಿ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಜ್ಞಾನಿ ಆಲ್ವಾರಿಸ್‌ರವರು ಕೊಂಕಣಿ ಬಾವುಟ ಹಾರಿಸುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ತದನಂತರ ಲೊಯೊಲಾ ವಿಕಾಸ ಕೇಂದ್ರದ ಸಭಾಂಗಣದಲ್ಲಿ ನಾಡಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಯಲ್ಲಾಪುರ- ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಮ ಹೆಬ್ಬಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತದನಂತರ ಶಾಸಕರು ಮಾತಾನಾಡಿ. ಸಿದ್ದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಿಂದ ಸಮಾಜದಲ್ಲಿ ಸಿದ್ದಿ ಜನಾಗದವರಿಗೆ ಮುಂದೆ ಬರಲು ಅವಕಾಶ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಜ್ಞಾನಿ ಆಲ್ವಾರಿಸ್‌ರವರ ಅಧ್ಯಕ್ಷತೆಯಲ್ಲಿ, ಗೌರವ ಅತಿಥಿಗಳಾಗಿ ವಿಧಾನಪರಿಷತ್ ಶಾಸಕರಾದ ಸನ್ಮಾನ್ಯ ಶ್ರೀ ಶಾಂತರಾಮ ಸಿದ್ದಿ. ಮಾಜಿ ಶಾಸಕರಾದ ಬಿ.ಎಸ್. ಪಾಟೀಲ್, ಮುಂಡುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣ, ಶಿರಸಿಯ ಸಹಾಯಕ ಆಯುಕ್ತರಾದ ಶ್ರೀಮತಿ ಕಾವ್ಯಾರಾಣಿ, ಲೊಯೋಲಾ ವಿಕಾಸ ಕೇಂದ್ರದ ನಿರ್ದೇಶಕರಾದ ಫಾ. ಅನಿಲ್ ಲೋಬೊ, ಜಿಲ್ಲಾ ಸಂಘಟನೆಯ ಉಪಾಧ್ಯಕ್ಷರಾದ ಶ್ರೀ ಮೊನು ದೊಡ್ಡಮಣಿ, ಸಿದ್ದಿ ಮುಖಂಡರಾದ ಶ್ರೀ ಅಲ್ಲಿಸಾಬ್ ಮೆಹಬುಬಸಾಬ್ ದೇಸಾಯಿ, ಶ್ರೀ ಹಸನಸಾಬ ಮೊದಿನಸಾಬ ಹುಲಕೊಪ್ಪ ಶ್ರೀ ಯಾಕೊಬ ನಾಯ್ಕ, ಶ್ರೀ ಲಿಲ್ಲಾಭಕ್ಷ ಸಿದ್ದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಅಕಾಡೆಮಿ ಸದಸ್ಯರಾದ ಶ್ರೀ ನವೀನ್ ಲೋಬೊ. ಶ್ರೀ ಪ್ರಮೋದ್ ಪಿಂಟೊರವರು ಹಾಜರಿದ್ದರು. ಅಕಾಡೆಮಿ ಅಧ್ಯಕ್ಷರು ಶ್ರೀ ಜೋಕಿಂ ಸ್ಪ್ಯಾನಿ ಆಲ್ವಾರಿಸ್‌ರವರು ಸ್ವಾಗತಿಸಿ, ಸ್ಥಳೀಯ ಶಾಸಕರಾದ ಶ್ರೀ ಶಾಂತರಾಮ ಸಿದ್ದಿಯವರು ನೆರೆದವರನ್ನು ವಂದಿಸಿದರು. ಶ್ರೀಮತಿ ಅಂಜಲಿ ಸಿದ್ದಿಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಲಾತಂಡಗಳಿಂದ ಸಿದ್ದಿ ಸಾಂಸ್ಕೃತಿಕ ನೃತ್ಯಗಳಾದ ದಮಾಮ್, ಪುಗಡಿ, ಗೊಂಬೆ ನೃತ್ಯ ಮತ್ತು ಇತರೆ ನೃತ್ಯಗಳ ಪ್ರದರ್ಶನವಾಯಿತು.