Media Release
Bantwal, Feb 4 : Bantwal Catholic Credit Co-Operative Society Ltd conducted an election on 18th January 2025 to choose directors for the next 5 year term.
ಬಂಟ್ವಾಳ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ) ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ದಿನಾಂಕ 18-01-2025 ರಂದು ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 14 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಲಯನ್ಸ್ ಕ್ಲಬ್, ಬಿ.ಸಿ. ರೋಡ್ ಇಲ್ಲಿ ಮತದಾನ ನಡೆದಿದ್ದು, ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಬಂಟ್ವಾಳ ಸಹಕಾರಿ ಅಭಿವೃದ್ದಿ ಅಧಿಕಾರಿ ಡಾ. ಜ್ಯೋತಿ ಡಿ. ಚುನಾವಣಾಧಿಕಾರಿಯಾಗಿದ್ದು, ಚುನಾವಣಾ ಪ್ರಕ್ರಿಯೆ ನಡೆಸಿದರು. ಸಿಇಓ (ಅಇಔ) ಸೆಲಿನ್ ಗ್ರೇಸಿ ಡಿಸೋಜ ಹಾಗೂ ಸಿಬ್ಬಂದಿಗಳು ಸಹಕರಿಸಿದರು.
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂಘದ ಹಾಲಿ ಅಧ್ಯಕ್ಷ ಜೀವನ್ ಲೋಯ್ಡ್ ಪಿಂಟೋ, ಉಪಾಧ್ಯಕ್ಷ ವಲೇರಿಯನ್ ಬರೆಟ್ಟೊ, ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫೆರ್ನಾಂಡಿಸ್, ಗ್ಲೋರಿಯಾ ಪ್ರೀಮಾ ಕುಟಿನ್ಹೊ, ವಿನ್ಸೆಂಟ್ ಕ್ಲಾಡಿ ಕಾರ್ಲೋ, ಲಾರೆನ್ಸ್ ಕ್ಲಿಫರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೋನ್ಸಾ, ಹಿಲಾರಿ ಕ್ರಾಸ್ತ, ಹ್ಯೂಬರ್ಟ್ ಲೋಬೊ ಜಯ ಗಳಿಸಿದ್ದಾರೆ.
ಪರಾಜಿತ ಅಭ್ಯರ್ಥಿಗಳಾದ ಜೀವನ್ ಲೋಬೊ, ರಿಚರ್ಡ್ ಮಿನೇಜಸ್, ಎವುಜಿನ್ ಲೋಬೊ ಕಡಿಮೆ ಮತಗಳಿಂದ ಸೋತಿದ್ದಾರೆ.
ಮಹಿಳಾ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅನಿತಾ ನೊರೊನ್ಹಾ, ಬೆನೆಡಿಕ್ಟಾ ಸಲ್ದಾನ್ಹ ಇವರು ಅವಿರೋಧ ಆಯ್ಕೆಯಾಗಿರುತ್ತಾರೆ. ಹಿ. ಪ್ರವರ್ಗ ಬಿ ಕ್ಷೇತ್ರದಿಂದ ಒಂದೇ ಒಂದು ನಾಮಪತ್ರ ಬಂದಿದ್ದು, ವಿಶಾಲ್ ಡಿಸೋಜ ಆಯ್ಕೆಯಾಗಿರುತ್ತಾರೆ.