Media Release

Mangaluru, September 28, 2024 : The Android mobile app named Daivik Amrith, including Daivik Amrith Konkani Spiritual Monthly, Daivik Amrith Media, and Daivik Amrith Pilgrimages Services, was launched on September 28 at the Bishop's house by Most Rev Dr Peter Paul Saldanha, Bishop of Mangalore Diocese.

ದೈವಿಕ್ ಅಮೃತ್ ಮೊಬೈಲ್ App ಉದ್ಘಾಟನೆ

ಮಂಗಳೂರು, ಸೆಪ್ಟೆಂಬರ್ 28 : ಕಳೆದ 19 ವರ್ಷಗಳಿಂದ ದೈವಿಕ್ ಅಮೃತ್ ಕೊಂಕಣಿ ಮಾಸಿಕ ಪತ್ರಿಕೆ, ದೈವಿಕ್ ಅಮೃತ್ ಮೀಡಿಯಾ ಮತ್ತು ದೈವಿಕ್ ಅಮೃತ್ ಯಾತ್ರಾ ಸಂಸ್ಥೆಗಳ ಮೂಲಕ ಜನಮನ್ನಣೆ ಗಳಿಸಿದ ದೈವಿಕ್ ಅಮೃತ್ ಸಂಸ್ಥೆಯ ಎಲ್ಲಾ ಸೇವೆಗಳನ್ನು ಒಳಗೊಂಡಂತಹಾ ದೈವಿಕ್ ಅಮೃತ್ ಮೊಬೈಲ್ ಆಪ್ (App) ನ್ನು ಸಪ್ಟೆಂಬರ್ 28 ರಂದು ಮಂಗಳೂರಿನ ಧರ್ಮಾಧ್ಯಕ್ಷರ ನಿವಾಸದಲ್ಲಿ ಮಂಗಳೂರಿನ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ದಾನ್ಗಾ ಲೋಕಾರ್ಪಣೆ ಮಾಡಿದರು.

ದೈವಿಕ್ ಅಮೃತ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ಆಂಡ್ರ್ಯೂ ಡಿಸೋಜಾ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಸಂತೋಷ್ ಲೋಬೊ ಸಂಸ್ಥೆ ನಡೆದು ಬಂದ ಹಾದಿಯ ಬಗ್ಗೆ ವಿವರಣೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಮೆಡಿಕಲ್ ಫಂಡ್‌ಗೆ ದೈವಿಕ್ ಅಮೃತ್ ಸಂಸ್ಥೆಯ ವತಿಯಿಂದ ದೇಣಿಗೆಯನ್ನು ಹಾಗೂ ದೈವಿಕ್ ಅಮೃತ್ ಪ್ರಕಾಶನದಿಂದ ಪ್ರಕಟಿಸಿದ ಪುಸ್ತಕಗಳನ್ನು ಸಮಿತಿಯ ಹಿರಿಯ ಸದಸ್ಯರಾದ ಶ್ರೀ ಜೆ.ವಿ.ಡಿಮೆಲ್ಲೊ ಧರ್ಮಾಧ್ಯಕ್ಷರಿಗೆ ಹಸ್ತಾಂತರಿಸಿದರು.

ಯಾತ್ರಾ ಸಂಸ್ಥೆಯ ವ್ಯವಸ್ಥಾಪಕಿ ಶ್ರೀಮತಿ ಶಾಂತಿ ಲೋಬೊ ವಂದನಾರ್ಪಣೆಗೈದರು. ಕಾರ್ಯಕ್ರಮಕ್ಕೆ ದೈವಿಕ್ ಅಮೃತ್ ಸಮಿತಿಯ ಸದಸ್ಯರು, ಮೊಬೈಲ್ ಆಪ್ ನ್ನು ತಯಾರಿಸಿದ ಶ್ರೀ ಲೆನ್ಸನ್ ಸಲ್ಡಾನ್ಹಾ ಉಪಸ್ಥಿತರಿದ್ದರು. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಆಪ್ ಲಭ್ಯವಿದೆ.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.