Media Release
Pics: Stanley Bantwal

Mangaluru, September 28, 2024 : MLC Ivan D'Souza, accompanied by the president of the Catholic Sabha Mangalore Pradesh, Alwyn D'Souza, and a delegation of officials, visited the Pavoor-Uliya Island to assess the illegal sand mining activities in the area.


ಅಕ್ರಮವಾಗಿ ಮರಳು ತೆಗೆಯುತ್ತಿರುವ ಪಾವುರು ಉಳಿಯ ಪ್ರದೇಶಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜರವರ ನಿಯೋಗದೊಂದಿಗೆ ವಿಧಾನಪರಿಷತ್ತ್ ಸದಸ್ಯರಾದ ಶ್ರೀ ಐವನ್ ಡಿಸೋಜರವರ ಭೇಟಿ

ಮಂಗಳೂರು, ಸೆಪ್ಟೆಂಬರ್ 28 : ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜರವರೊಂದಿಗೆ ವಿಧಾನಪರಿಷತ್ತ್ ಸದಸ್ಯರಾದ ಶ್ರೀ ಐವನ್ ಡಿಸೋಜರವರು ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಪಾವ್ಲ್ ರೋಲ್ಪಿ ಡಿಕೋಸ್ತ, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊ ಹಾಗೂ ಬಂಟ್ವಾಳ ವಲಯ ಅಧ್ಯಕ್ಷರಾದ ಶ್ರೀ ಜೋನ್ ಲಸ್ರಾದೊ, ಸುರತ್ಕಲ್ ವಲಯ ಅಧ್ಯಕ್ಷರಾದ ಶ್ರೀ ಲಾರೆನ್ಸ್ ಡಿಸೋಜ, ಪೆಜಾರ್ ವಲಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜ, ಕಾಸರ್‍ಗೋಡ್ ವಲಯ ಅಧ್ಯಕ್ಷರಾದ ಶ್ರೀ ಪ್ರಾನ್ಸಿಸ್ ಮೊಂತೇರೊ, ಮುಡಿಪು ಘಟಕದ ಅಧ್ಯಕ್ಷರಾದ ಶ್ರೀ ರಜತ್ ವೇಗಸ್ ಪಾವುರು ಉಳಿಯ ದ್ವೀಪಕ್ಕೆ ಭೇಟಿ ನೀಡಿ ಪಾವುರು ದ್ವೀಪದ ಬಾಲ ಯೇಸು ದೇವಾಲಯದ ಧರ್ಮಗುರುಗಳಾದ ಫಾ. ಮನೋಹರ್ ಡಿಸೋಜ, ಚರ್ಚಿನ ಪಾಲನಾ ಮಂಡಳಿ, ಅಡಳಿತ ಮಂಡಳಿಯ ಸದಸ್ಯರು ಅಲ್ಲಿಯ ಸ್ಥಳೀಯ ಜನರ ಅಹವಾಲನ್ನು ಸ್ವೀಕರಿಸಿ, ಅಕ್ರಮ ಮರಳುಗಾರಿಕೆಯ ಸ್ಥಳವನ್ನು ವೀಕ್ಷಿಸಿ ಸತ್ಯಸತ್ಯತೆಯನ್ನು ಕಣ್ಣಾರೆ ಕಂಡುಕೊಂಡರು.

ಕಥೊಲಿಕ್ ಸಭೆಯ ನಿಯೋಗದೊಂದಿಗೆ ಸೋಮವಾರ ತಾ. 30-09-2024ರಂದು ಬೆಳಿಗ್ಗೆ 10.00 ಗಂಟೆಗೆ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ, ಗುರುವಾರ ತಾ.03-10-2024ರಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ, ವಿಧಾನಸಭಾ ಅಧ್ಯಕ್ಷರಾದ ಶ್ರೀ ಯು.ಟಿ.ಖಾದರ್‍ರವರಿಗೆ, ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನರವರಿಗೆ, ವಿರೋಧಪಕ್ಷದ ನಾಯಕರಾದ ಆರ್ ಆಶೋಕ್‍ರವರಿಗೆ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್‍ರವರಿಗೆ ಭೇಟಿಯಾಗಿ ಪಾವುರು ಉಳಿಯ, ಉಳ್ಳಾಯ ಹೊಯ್ಗೆ, ರಾಣಿಪುರ, 62ನೇ ತೋಕುರು, ಈ ಪ್ರದೇಶಗಳಲ್ಲಿ ಹಾಗೂ ಹೊಸದಾಗಿ ನಿರ್ಮಿಸಿದ ಡ್ಯಾಂನ ಬುಡದಲ್ಲಿ ಅಕ್ರಮವಾಗಿ ಮರಳು ತೆಗೆಯುವುದನ್ನು ತಕ್ಷಣದಲ್ಲಿ ನಿಷೇಧಿಸುವರೇ ಕ್ರಮ ಕೈಗೊಳ್ಳುವ ಕುರಿತು ಮನವಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು ವಿಧಾನಸಭಾ ಅಧ್ಯಕ್ಷರಾದ ಶ್ರೀ ಯು.ಟಿ.ಖಾದರ್‍ರವರ ಜೊತೆಗೂಡಿ ಪಾವುರು ಉಳಿಯ ತೂಗುಸೇತುವೆ ನಿರ್ಮಿಸುವಲ್ಲಿ ಮುತುವರ್ಜಿಯನ್ನು ವಹಿಸುತ್ತೇನೆಂಬ ಭರವಸೆಯನ್ನು ನೀಡಿರುತ್ತಾರೆ.

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.