Media Release
Bantwal, July 28 : Under the leadership of Catholic Sabha Mangalore Pradesh (R.) Bantwal Deanery, in association with D.K. District Minority Welfare Department and the Corporation, an information camp for the privileges available to minorities and an honor program was organised at Modankap Anugraha Sabha Bhavan, Bantwal on July 28, 2024.
ಕಥೋಲಿಕ್ ಸಭಾ ಬಂಟ್ವಾಳ ವಲಯ ಇದರ ಮುಂದಾಳತ್ವದಲ್ಲಿ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ
ಜುಲೈ 28 : ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಬಂಟ್ವಾಳ ವಲಯ, ಇವರ ಮುಂದಾಳತ್ವದಲ್ಲಿ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಇವರ ಸಹಯೋಗದೊಂದಿಗೆ ಅಲ್ಪಸಂಖ್ಯಾತರಿಗೆ ಲಭ್ಯವಿ ರುವ ಸವಲತ್ತುಗಳಿಗೆ ಮಾಹಿತಿ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಮೊಡಂಕಾಪು ಅನುಗ್ರಹ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಫಾ.ವಲೇರಿಯನ್ ಡಿ.ಸೋಜ ಅವರು ಮಾತನಾಡಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸರಕಾರದ ಕೆಲಸ ದೇವರ ಕೆಲಸ ಎಂಬ ಮನಸ್ಸಿನಿಂದ ಮಾಡಿದಾಗ ಸರಕಾರದ ಎಲ್ಲಾ ಸವಲತ್ತುಗಳು ಫಲಾನುಭವಿಗಳಿಗೆ ಸಿಗಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ.ಸೋಜ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದ ಸಂಧರ್ಬದಲ್ಲಿ ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಚರ್ಚ್ ಗಳ ಅಭಿವೃದ್ಧಿಗೆ ಅನುದಾನವನ್ನು ಒದಗಿಸಿದ್ದೇನೆ, ಈ ಬಾರಿಯೂ ಬಜೆಟ್ ನಲ್ಲಿ ಸರಕಾರ ಅನುದಾನವನ್ನು ಘೋಷಣೆ ಮಾಡಿದೆ, ಅದರ ಸಂಪೂರ್ಣ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ಸರಕಾರದ ವಿವಿಧ ಯೋಜನೆಗಳ ಮಾಹಿತಿ ಪಡೆದು ಪ್ರತಿಯೊಬ್ಬರು ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಬಳಿಕ ಸಭೆಯಲ್ಲಿ ಮಾತನಾಡಿದ ಐವನ್ ಡಿ.ಸೋಜ ಅವರು, ಜನಸಾಮಾನ್ಯರ ನಡುವಿನ ಬಾಂಧವ್ಯವನ್ನು ವೃದ್ದಿಸಿ, ಜವಾಬ್ದಾರಿಯಿಂದ ಜನರ ನಡುವೆ ಇದ್ದು,ಜನಸಾಮಾನ್ಯರ ಬದುಕಿಗೆ ಪೂರಕವಾದ ವಾತಾವರಣ ನಿರ್ಮಿಸಿ, ಸಮಸ್ಯೆ ಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕರ್ತವ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಭರವಸೆಯಂತೆ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಹಾಗೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡಿದ್ದಾರೆ. ಇದರ ಜೊತೆಗೆ ಕ್ರಿಶ್ಚಿಯನ್ ಸಮುದಾಯ ನಡೆಸುವ ಆಸ್ಪತ್ರೆಗಳಿಗೆ ಅನುದಾನವನ್ನು ಒದಗಿಸುವ ನಿಟ್ಟಿನಲ್ಲಿ ಕಾನೂನು ರೂಪಿಸಲು ಚಿಂತನೆ ನಡೆಸಿ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಶಾಲೆಗಳ ರಕ್ಷಣೆಗೆ ಮುಂದಾಗುತ್ತೇವೆ ಎಂದು ಭರವಸೆ ನೀಡಿದರು. ಜೆರುಸ್ಲೇಮ್ ಗೆ ಹೋಗುವ ಸಮುದಾಯದ ಹಿರಿಯರಿಗೆ ಸಬ್ಸಿಡಿ ದರದಲ್ಲಿ ಕ್ರೈಸ್ತ ಸಮುದಾಯದ ಅನುದಾನವನ್ನು ಬಳಸಲು ಯೋಜನೆ ರೂಪಿಸುವ ಯೋಚನೆ ಮಾಡಿದ್ದೇವೆ, ಮುಂದಿನ ದಿನಗಳಲ್ಲಿ ಎಲ್ಲಾ ಬೇಡಿಕೆಗಳಿಗೆ ಸದಾ ಸ್ಪಂದನೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರಾಗಿದ್ದಾರೆ, ಆದರೆ ನಮ್ಮ ಜಿಲ್ಲೆಯಲ್ಲಿಯೇ ಅವಕಾಶಗಳನ್ನು ಬಳಸಿಕೊಂಡು ಸರಕಾರಿ ನೌಕರಿ ಅಥವಾ ದೊಡ್ಡ ಉದ್ಯಮದ ಮೂಲಕ ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಕಥೊಲಿಕ್ ಸಭಾ ಮಂಗಳೂರ್ ಪ್ರದೇಶ್ ರಿ .ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊ, ಬೂಡ ಮಾಜಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಅರುಣ್ ರೋಶನ್ ಡಿ.ಸೋಜ,, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿನೇಂದ್ರ ಕೋಟ್ಯಾನ್, ನಿಗಮದ ಜಿಲ್ಲಾ ವ್ಯವಸ್ಥಾಪಕ ಯಶೋಧರ ಜೆ. , ಕಥೋಲಿಕ್ ಸಭಾ ಇದರ ಬಂಟ್ವಾಳ ವಲಯದ ಅಧ್ಯಕ್ಷರಾದ ಶ್ರೀ ಜೋನ್ ಲಸ್ರಾದೊ ಕಾರ್ಯಕ್ರಮದ ಅಧ್ಯಕ್ಷರು, ಕಾರ್ಯದರ್ಶಿ ಆಸ್ಟಿನ್ ಲೋಬೋ, ವಿವಿಧ ಚರ್ಚ್ ಗಳ ಧರ್ಮಗುರುಗಳು, ಸಮುದಾಯ ಅಭಿವೃದ್ಧಿ ಸಂಚಾಲಕ ಸಿರಿಲ್ ನೊರೊನ್ಹಾ, ರಾಜಕೀಯ ಸಂಚಾಲಕ ರಾಯನ್ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಬಂಟ್ವಾಳ ಇದರ ಅಧ್ಯಕ್ಷ ಜೋನ್ ಲಸ್ರಾದೋ ಸ್ವಾಗತಿಸಿ, ಕಾರ್ಯದರ್ಶಿ ಅಸ್ಟಿನ್ ಲೋಬೋ ವಂದಿಸಿದರು, ಅಲ್ಫೋನ್ಸ್ ಪೆರ್ನಾಂಡಿಸ್ ನೀರ್ಕಾನ ಅವರು ಕಾರ್ಯಕ್ರಮ ನಿರೂಪಿಸಿದರು.