Media Release
Mangaluru, Oct 5 : Mangalore North Zone, Taluk Level Athletic Games were held on October 3rd and 4th, 2023 at Mangala Stadium. The event was held with the joint collaboration of Zilla Panchayat School Education Department, District Education Officer's Office, Mangalore North Zone and St. Lawrence English Medium School, Bondel.
ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಕ್ರೀಡಾಕೂಟ 2023
ಮಂಗಳೂರು ಉತ್ತರ ವಲಯ, ತಾಲೂಕು ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟವು ಅಕ್ಟೋಬರ್ 3, ಮತ್ತು 4, 2023 ರಂದು ಮಂಗಳ ಕ್ರೀಡಾಂಗಣದಲ್ಲಿ ನಡೆಯಿತು. ದ. ಕ. ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಮಂಗಳೂರು ಉತ್ತರ ವಲಯ ಹಾಗೂ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ, ಬೊಂದೇಲ್ ಇವರ ಸಹಯೋಗದಲ್ಲಿ ಕ್ರೀಡಾಕೂಟವನ್ನು ಸಂಭ್ರಮದಿಂದ ಉದ್ಘಾಟಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾ. ಆಂಟನಿ ಸೇರಾ, ಅಧ್ಯಕ್ಷರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ವಲಯ ಶ್ರೀ ಜೇಮ್ಸ್ ಕುಟಿನ್ಹಾ, ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ವಂದನೀಯ ಫಾ ಆಂಡ್ರ್ಯೂ ಲಿಯೋ ಡಿಸೋಜಾ ರವರು ಧ್ವಜಾರೋಹಣ ನೆರವೇರಿಸಿದರು.
ಕ್ರೀಡಾಕೂಟವನ್ನು ಸಂಘಟಿಸಿದ ಸೈಂಟ್ ಲಾರೆನ್ಸ್ ಶಾಲೆಯ ವಿದ್ಯಾರ್ಥಿಗಳಿಂದ ಸುಂದರವಾದ ನೃತ್ಯ, ಲೇಡಿ ಹಿಲ್ ಶಾಲೆಯ ಮಕ್ಕಳಿಂದ ಬ್ಯಾಂಡ್ ನಾದ. ಕ್ರೀಡಾಪಟುಗಳಿಂದ ಪಥ ಸಂಚಲನ ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಶ್ರೀ ಜಿ ಉಸ್ಮಾನ್ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ವಲಯ, ಶ್ರೀ ಭರತ್ ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು, ವಂದನೀಯ ಫಾ ಪೀಟರ್ ಗೊನ್ಸಾಲ್ವಿಸ್ ಸೇಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ ಮಂಗಳೂರು ಇದರ ಮುಖ್ಯ ಶಿಕ್ಷಕರು, ಶ್ರೀ ಜಾನ್ ಡಿಸಿಲ್ವಾ ಸೇಂಟ್ ಲಾರೆನ್ಸ್ ಚರ್ಚಿನ ಉಪಾಧ್ಯಕ್ಷರು, ಶ್ರೀ ವಿನೋದ್ ಕುಮಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಸೇಂಟ್ ಲಾರೆನ್ಸ್ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಮ್ಯಾ ಶೆಟ್ಟಿ , ಶ್ರೀಮತಿ ಆಶಾ ನಾಯಕ್ ಜಿಲ್ಲಾ ಉಪಾಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಹರೀಶ್ ರೈಬಿ ಜಿಲ್ಲಾ ಕಾರ್ಯದರ್ಶಿ ದಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ರಾಘವೇಂದ್ರ ಅಧ್ಯಕ್ಷರು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಉತ್ತರ ವಲಯ, ಶ್ರೀಮತಿ ಚೆಲುವಮ್ಮ ಅಧ್ಯಕ್ಷರು ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶ್ರೀ ಜೈರಾಮ್ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶ್ರೀ ಉಮೇಶ್ ಅಧ್ಯಕ್ಷರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘ, ಶ್ರೀ ಹರಿಪ್ರಸಾದ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಶ್ರೀಮತಿ ಪ್ರೇಮಲತಾ ಸಿ ಆರ್ ಪಿ ಕಾವೂರು ಕ್ಲಸ್ಟರ್, ಹಾಗೂ ಇತರ ಸಿ ಆರ್ ಪಿ ಹಾಗೂ ಬಿ ಆರ್ ಪಿ ಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತದನಂತರ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರು ಜೊತೆಗೂಡಿ ವಿವಿಧ ಅಥ್ಲೆಟಿಕ್ಸ್ ಕ್ರೀಡೆಗಳನ್ನು ತಾಲೂಕಿನ ಪ್ರತಿಭಾನ್ವಿತ ಕ್ರೀಡಾಳುಗಳಿಗೆ ನಡೆಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.
ಅಕ್ಟೋಬರ್ 4 ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಶ್ರೀ ಜಿ ಉಸ್ಮಾನ್ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಮಂಗಳೂರು ಉತ್ತರ ವಲಯ ಇವರು ಭಾಗವಹಿಸಿದ ಹಾಗು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ಹಾಗೂ ಕ್ರೀಡೆಯನ್ನು ಸಂಘಟಿಸಿದ ಸ್ವಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಶ್ರೀ ಭರತ್ ಕೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳು ಇಲಾಖೆಯ ಈ ಕಾರ್ಯಕ್ರಮವನ್ನು ಸುವ್ಯವಸ್ಥಿತವಾಗಿ ನಡೆಸಿ ಕೊಟ್ಟಂತಹ ಎಲ್ಲರಿಗೆ ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಸಂಚಾಲಕರು ವಂದನೀಯ ಫಾ ಆಂಡ್ರ್ಯೂ ಲಿಯೋ ಡಿಸೋಜಾ ವೈಯುಕ್ತಿಕ ಚಾಂಪಿಯನ್ ಹಾಗೂ ಗ್ರೂಪ್ ಚಾಂಪಿಯನ್ಶಿಪ್ ಟ್ರೋಪಿಗಳನ್ನು ನೀಡಿ ಗೌರವಿಸಿದರು.