Media Release

Mangaluru, Feb 18, 2025 : The Cricket Premier League (CPL) Season 2, held on February 15 and 16 at the Urva Grounds, was a grand success organised by the Canara Sports and Cultural Association (CSCA) under the leadership of CSCA president Vinod Pinto Taccode.


CPL ಸೀಸನ್ ಟು ಕ್ರಿಕೆಟ್ ಪಂದ್ಯಾಟ : ನೈಂಟಿ ವಾರಿಯರ್ಸ್ ವಿನ್ನರ್ ; ರೋಯಲ್ ಸ್ಟೈಕರ್ಸ್ ರನ್ನರ್

ಫೆಬ್ರೆವರಿ 15 ಮತ್ತು 16 ರಂದು ಕ್ರಿಕೆಟ್ ಕಾಶಿ ಉರ್ವಾ ಮೈದಾನದಲ್ಲಿ ಕೆನರಾ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಎಸೋಸಿಯೇಷನ್ CSCA ಅಧ್ಯಕ್ಷ ವಿನೋದ್ ಪಿಂಟೋ ತಾಕೋಡೆ ಇವರ ನಾಯಕತ್ವದಲ್ಲಿ CPL ಸೀಸನ್ ಟು ಕ್ರಿಕೆಟ್ ಪಂದ್ಯಾಟವು ಬಹು ವಿಜ್ರಂಭಣೆಯಿಂದ ನೆರವೇರಿತು.

ರೋಹನ್ ಕೊರ್ಪರೇಷನ್ ಮಾಲಕರಾದ ರೋಹನ್ ಮೊಂತೇರೋರವರ ಅಧ್ಯಕ್ಷತೆಯಲ್ಲಿ ಕ್ರಿಕೆಟ್ ಪಂದ್ಯಾಟದ ಉದ್ಗಾಟನಾ ಸಮಾರಂಭ ನೆರವೇರಿತು.
ಮುಖ್ಯ ಅಥಿತಿಗಳಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್; ಲೋಟಸ್ ಪ್ರಾಪರ್ಟಿ ಮ್ಮಾನೆಜಿಂಗ್ ಪಾರ್ಟ್ನರ್ ಸಂಪತ್ ಶೆಟ್ಟಿ; ಉದ್ಯಮಿ ರಘ ಪ್ರಶಾಂತ್ ಪಿಂಟೋ ; ಬಿಜಯ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಪಿಂಟೊ ಹಾಜರಿದ್ದು ಸ್ಟ್ಯಾನಿ ಅಲ್ವಾರಿಸ್ ಹಾಗೂ ರೋಹನ್ ಮೊಂತೇರೊ ರವರು ಮಾತನಾಡಿ ಶುಭ ಹಾರೈಸಿದರು.

CSCA ಅಧ್ಯಕ್ಷರಾದ ವಿನೋದ್ ಪಿಂಟೋ ತಾಕೋಡೆ ಗಣ್ಯರನ್ನು ಸ್ವಾಗತಿಸಿದ್ದು ಜೈಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂಧರ್ಭದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ತೀರ್ಪುಗಾರರಾಗಿ 40 ವರುಷ ಸೇವೆ ನೀಡಿದ ರೊಲ್ಯಾಂಡ್ ಪಿಂಟೋರವರನ್ನು ವಿಷೇಶವಾಗಿ ಸನ್ಮಾನಿಸಲಾಯಿತು.

ಮಂಗಳೂರು ಡಯಾಸಿಸ್ ಗೆ ಒಳ ಪಟ್ಟ 10 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು ಎಲ್ಲಾ ಹತ್ತು ತಂಡದ ಮಾಲಕರನ್ನು ಸನ್ಮಾನಿಸಲಾಯಿತು.

ಎರಡು ದಿನಗಳ ಕಾಲ ಲೀಗ್ ಮಾದರಿಯಲ್ಲಿ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾಟಗಳು ಸಾಗಿ ಬಂದವು.

ಈ ಸಂದರ್ಭದಲ್ಲಿ ಅನೇಕ ಗಣ್ಯರು ಅಗಮಿಸಿ ಶುಭ ಹಾರೈಸಿದರು.
ಪ್ರಮುಖವಾಗಿ ಅನಿವಾಸಿ ಉದ್ಯಮಿ ಐವರಿ ಗ್ರ್ಯಾಂಡ್ ರಿಯಲ್ ಎಸ್ಟೇಟ್ ಮೂಲಕರಾದ ಮೈಕಲ್ ಡಿಸೋಜರವರು ಸರಿ ಸುಮಾರು ಒಂದು ಗಂಟೆಯ ಕಾಲ ಆಟಗಾರರೊಡನೆ ಬೆರೆತು ಪಂದ್ಯಾಟ ವೀಕ್ಷಿಸಿದರು.

ತಾ 16 ರಾತ್ರಿ 9:30 ಕ್ಕೆ ಪಂದ್ಯಾಟಗಳು ಕೊನೆಗೊಂಡು ಸಮಾರೋಪ ಸಮಾರಂಭ ನಡೆಸಲಾಯಿತು,
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಡಯಾಸಿಸ್ ನ PRO ರೋಯ್ ಕ್ಯಾಸ್ತೆಲಿನೋ ವಹಿಸಿಕೊಂಡರೆ,
ಮುಖ್ಯ ಅಥಿತಿಗಳಾಗಿ ಅನಿವಾಸಿ ಉದ್ಯಮಿ ಚಲನಚಿತ್ರ ನಿರ್ಮಾಪಕ ಲೆಪ್ಟಿನೆಂಟ್ ಜನರಲ್ ಅಂಬ್ಯಾಸಿಡರ್ ಪ್ರ್ಯಾಂಕ್ ಪೆರ್ನಾಂಡಿಸ್,
ನಿಧಿ ಲ್ಯಾಂಡ್ ಚೇರ್ಮನ್ ಮತ್ತು M.D ಪ್ರಶಾಂತ್ ಸನಿಲ್ ಇವರು ಹಾಜರಿದ್ದರು.

ಈ ಸಂಧರ್ಭದಲ್ಲಿ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಆಟಗಾರ್ತಿ ವಿಲೋನಾ ಡಿಕುನ್ನಾ ಅವರನ್ನು ಸನ್ಮ್ಮಾನಿಸಲಾಯಿತು.
CSCA ಅಧ್ಯಕ್ಷ ವಿನೋದ್ ಪಿಂಟೋ ಅಗಮಿಸಿದ ಗಣ್ಯರನ್ನು ಸ್ವಾಗತಿಸಿ, ಗ್ರೀಷ್ಮಾ ಸಲ್ಡಾನಾ ಕಾರ್ಯಕ್ರಮ ನಿರೂಪಿಸಿದರು.

ಕ್ರಿಕೆಟ್ ಪಂದ್ಯಾಟದಲ್ಲಿ ಗೆದ್ದ ತಂಡಗಳ ವಿವರ :

1) ಅನಿಲ್ ಮೂಲಕತ್ವದ ನೈಂಟಿ ವಾರಿಯರ್ಸ್ ಕೂಳೂರು ಒಂದು ಲಕ್ಷ ನಗದು ಹಾಗೂ ಟ್ರೋಫಿ
2) ಮರ್ವಿನ್ ಲೋಬೊ, ಜಿತೇಶ್, ರೋಶನ್ ಇವರ ಮಾಲಕತ್ವದ ರೋಯಲ್ ಸ್ಟೈಕರ್ಸ್ ತಂಡವು 60 ಸಾವಿರ ನಗದು ಹಾಗೂ ಟ್ರೋಫಿ
3) ಲೈನಲ್ ಹಾಗೂ ನವೀನ್ ಮಾಲಕತ್ವದ ಎಲ್ ಡೋ ರಾಡೋ ತಂಡವು 20 ಸಾವಿರ ನಗದು ಹಾಗೂ ಟ್ರೋಫಿ
4) ರಿಚ್ಚರ್ಡ್ ಹಾಗೂ ರಾಜೇಶ್ ಮಾಲಕತ್ವದ ಜೆಬಿ ವಾರಿಯರ್ಸ್ ತಂಡವು 20 ಸಾವಿರ ನಗದು ಹಾಗೂ ಟ್ರೋಫಿ

ವೈಯುಕ್ತಿಕ ಬಹುಮಾನಗಳು

ಬೆಸ್ಟ್ ಅಲ್ಲ್ರೌಂಡರ್- ಜೀವನ್ ನೈಂಟಿ ವಾರಿಯರ್ಸ್,
ಮೆನ್ ಆಫ಼್ ದಿ ಟೂರ್ನಮೆಂಟ್- ಗ್ಲೆನ್ಸನ್ ನೈಂಟಿ ವಾರಿಯರ್ಸ್,
ಇಮ್ಯಾಜಿನ್ ಪ್ಲೇಯರ್- ನಿತಿನ್ ರೋಯಲ್ ಸ್ಟ್ರೈಕರ್ಸ್ ,
ಬೆಸ್ಟ್ ಬ್ಯಾಟ್ಸಮನ್ - ಫ್ರಾನ್ಸಿಸ್ ರೋಯಲ್ ಸ್ಟೈಕರ್ಸ್,
ಬೆಸ್ಟ್ ಫೀಲ್ಡರ್- ವಿಶ್ವಾಸ್ FM ಸ್ಟ್ರೆಕರ್ಸ್, ಆರೆಂಜ್ ಕ್ಯಾಪ್ ಹೋಲ್ಡರ್ - ಫ್ರಾನ್ಸಿಸ್ ರೋಯಲ್ ಸ್ಟ್ರೆಕರ್ಸ್,
ಪರ್ಪಲ್ ಕ್ಯಾಪ್ ಹೋಲ್ಡರ್- ಮೇಲ್ರೊಯ್ ನೈಂಟಿ ವಾರಿಯರ್ಸ್

Tags:

Copyright © 2015 - www.catholictime.com.
All rights reserved.

About Us

Disclaimer

Contact

Powered by eCreators.