Media Release
Mangaluru, Jan 21, 2025 : Fed up with the negligence of the officials on the Mangaluru Bikarnakatte National Highway, Stany Bantwal took initiative in putting up zebra cross near the U-turn opposite Infant Jesus Shrine gate, for the benefit of commuters.
ಮಂಗಳೂರು ಬಿಕರ್ನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸತ್ತು ಸ್ವತಃ ಹ ಝೀಬ್ರಾ ಕ್ರಾಸ್ ಹಾಕಿದ ಸ್ಟ್ಯಾನಿ ಬಂಟ್ವಾಳ್
ಮಂಗಳೂರು ಬಿಕರ್ಣಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಾಲ ಯೇಸು ಪುಣ್ಯಕ್ಷೇತ್ರದ ದ್ವಾರದ ಎದುರುಗಡೆ ಇರುವ ಯು ಟರ್ನ್ ಬಳಿ ಝೀಬ್ರಾ ಕ್ರಾಸ್ ಇತ್ತು, ಅದು ಸವೆದು ಹೋಗಿ ಹಲವು ವರ್ಷ ವಾಗಿತ್ತು. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಗಮನಕ್ಕೆ ತಂದರು. ನಮ್ಮಲ್ಲಿ ಜನ ಇಲ್ಲಾ ಎಂದು ಕೇರ್ ಲೆಸ್ ಮಾಡುತಿದ್ದರು. ಇಲ್ಲಿ ಜನರಿಗೆ ರಸ್ತೆ ದಾಟಲು ತುಂಬಾ ಕಷ್ಟ ಆಗುತ್ತಿದ್ದುಈ ಬಗ್ಗೆ ಮತ್ತೆ ನಾನೇ ಖುದ್ದಾಗಿ ನಂತೂರ್ ನಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಕಚೇರಿ ಗೆ ತೆರಳಿ ಅಲ್ಲಿ ಇರುವ ಅಧಿಕಾರಿ ಗಳ ಗಮನಕ್ಕೆ ತಂದೇ ಅವರು ನಮ್ಮಲ್ಲಿ ಜನ ಇಲ್ಲಾ ಬೇಕಾದ್ರೆ 20,000 ಸಾವಿರ ಹಣ ಕೊಡಿ ನಾವೂ ಮಾಡಿಸಿ ಕೊಡುತ್ತೇವೆ ಎಂದು ಹೇಳಿದರು. ಅದಕ್ಕೆ ನಾನೂ ಏನೂ ಉತ್ತರ ಕೊಡದೆ ಸೀದಾ ಬಂದು ಟ್ರಾಫಿಕ್ ಪೊಲೀಸ್ ಅಧಿಕಾರಿ ಗಳಲ್ಲಿ ವಿಷಯ ತಿಳಿಸಿ ನಾನೇ ಝೀಬ್ರಾ ಕ್ರಾಸ್ ಹಾಕುತ್ತೇನೆ ಎಂದು ಹೇಳಿದೆ. ಅವರು ನನಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು. ನಾನೂ ಪೈಂಟ್ ಖರೀದಿ ಮಾಡಿ ಝೀಬ್ರಾ ಕ್ರಾಸ್ ಮಾಡಿದ್ದು ನನಗೆ ಜೆರ್ರಿ ಲೋಬೊ ಮಿಹಿರ್ ಡಿಕ್ಸಿತ್ ಮತ್ತು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಸಹಕಾರ ನೀಡಿದರು. ಇದರಿಂದ ಸಾರ್ವಜನಿಕ ರಿಗೆ ರಸ್ತೆ ದಾಟಲು ತುಂಬಾ ಅನುಕೂಲ ವಾಗುತ್ತೆ. ರಾಷ್ಟ್ರೀಯ ಹೆದ್ದಾರಿ ಯವರು ಜನರಿಂದ ಇಷ್ಟು ಸುಂಕ ವಸೂಲಿ ಮಾಡುವಾಗ, ಈ ಕೆಲಸ ಮಾಡಲು ಹಣ ಕೇಳುವಾಗ ಇವರಿಗೆ ನಾಚಿಕೆಯಾಗಬೇಕು, ಇವರಿಗೆ ಆಗದ ಕೆಲಸ ನಾನೂ ಮಾಡಿ ತೋರಿಸಿದ್ದೇನೆ, ಎಂದು ಸ್ಟ್ಯಾನಿ ಬಂಟ್ವಾಳ್ ವಿವರಿಸಿದರು.
Watch Video :